ಗುರುವಾರ, ಮೇ 10, 2012

ಅವಿವಾಹಿತರ ಬೆಸೆಯುವ ಪ್ರೀತಿ ಧಾಮ ವಧು ವರರ ವೇದಿಕೆ

                                                                          

ಛಲವಾದಿ  ಬ೦ಧುಗಳೇ ನಮಸ್ಕಾರ

" ಮದುವೆ " ಎನ್ನುವ ಮೂರಕ್ಷರ ಬದುಕಿನ ಮಹತ್ವದ ಘಟ್ಟ .ಈ ಬದುಕಿನ ತಿರುವಿಗೆ ಕಾರಣ " ಹರೆಯ ", ಈ  ಹರೆಯಕ್ಕೆ ಆಧಾರ "ಪ್ರೇಮ " . ಪ್ರೇಮ , ಒಂದು ಸುಂದರ ಸಂವೇದನೆ, ಅದ್ಬುತವಾದ ಅನುಭವ. ಜೀವನವನ್ನು ಬಹು ಭಾಗ ರಂಜಿಸುವ ಶಕ್ತಿ ಪ್ರೆಮಕ್ಕಿದೆ. ಇಂತಹ ಪ್ರೇಮಮಯ ಜೀವನಕ್ಕೆ " ಮದುವೆ" ಯೇ ಸೇತುವೆ.

ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತೆ ಅಂತಾರೆ. " ಮದುವೆ ಮಾಡಿ ನೋಡು ,ಮನೆ ಕಟ್ಟಿ ನೋಡು " ಎಂಬ ಗಾದೆ ಮಾತಿದೆ. ಮದುವೆ ಮಾಡಿಸುವ ಕಾರ್ಯ ಅದೊಂದು ಪುಣ್ಯ . ಹೆಣ್ಣು , ಗಂಡಿನ ಮದ್ಯದ ಆಕರ್ಷಣೆಗೆ ಸೇತುವಾಗಿ " ಮದುವೆ " ನಿಲ್ಲುತ್ತದೆ. ಹೆತ್ತವರು , ಒಡಹುಟ್ಟಿದವರು,ಬಂಧು ಗಳಿಂದ ದೂರವಾಗಿ ಹೋಗಿ ತಮ್ಮದೇ ಆದ ಪ್ರಪಂಚವನ್ನು ನಿರ್ಮಿಸಿಕೊಂಡು , "ನಾನು ಬಡವ, ನೀನು ಬಡವಿ, ಒಲವೆ ಬದುಕು" ಎಂದು ಹಾಡಿ, ನೆನಪುಗಳ ಗೂಡು ಕಟ್ಟಿಕೊಂಡು ಬದುಕುವ ವೇದಿಕೆಗೆ ಮುನ್ನುಡಿಯಾಗಲು " ಛಲವಾದಿ ವಧು-ವರರ ಅನ್ವೆಷಣಾ ವೇದಿಕೆ " ಜನ್ಮ ತಾಳಿದೆ.ನಮ್ಮದೇ ಆದ ಹಲವು ಗೆಳೆಯ , ಗೆಳತಿಯರ ಮದ್ಯೆ " ಮದುವೆ " ಎಂಬ ಮಂಗಳ ಕಾರ್ಯಕ್ಕೆ ಸೂತ್ರದಾರಿ ಯಾಗಿ " ಛಲವಾದಿ ವಧು-ವರರ ಅನ್ವೆಷಣಾ ವೇದಿಕೆ " ಸೇತುವೆ ಯಾಗಿ ಕಾರ್ಯ ನಿರ್ವಹಿಸುತ್ತದೆ. * ಮದುವೆಯಾಗಬಯಸುವ ಗೆಳೆಯ , ಗೆಳತಿಯರು   chalavadidoregalu@gmail.com  ಗೆ ನಿಮ್ಮ ಸ್ವವಿವರಗಳು , ಭಾವಚಿತ್ರದೊಂದಿಗೆ ಮಿಂಚೆ ಕಳುಹಿಸಿ.  ವದು ,ವರರ ನಡುವೆ ಸೇತುವಾಗಿ ನಾವು ಸಂವಹನ ನಡೆಸುತ್ತೇವೆ.


  1. ವಧು /ವರನ ಹೆಸರು,ತಂದೆಯ ಹೆಸರು ,ತಾಯಿಯ ಹೆಸರು .
  2. ವಿದ್ಯಾರ್ಹತೆ. 
  3. ಔದ್ಯೋಗಿಕ ವಿವರಗಳು- ಸಂಬಳ ಇತ್ಯಾದಿ .
  4. ಕುಟುಂಬದ ಹಿನ್ನಲೆ -ಪೊಷಕರ ಉದ್ಯೋಗ, ವಾಸಸ್ಥಳ ,ಅಣ್ಣ -ತಮ್ಮ, ಅಕ್ಕ -ತಂಗಿಯ ವಿವರಗಳು.
  5. ಸಂಪರ್ಕ ವಿವರಗಳು ,ದೂರವಾಣಿ, ಅಂಚೆ ವಿಳಾಸ (ಈ ವಿವರಗಳನ್ನು ಬ್ಲಾಗ್ ನಲ್ಲಿ ಪ್ರಕಟಿಸುವುದಿಲ್ಲ )
  6. ಜಾತಿ, ಮನೆ ದೇವರ ವಿವರ, ರಾಶಿ, ಕುಲ ,ಗೋತ್ರ .(ಈ ವಿವರಗಳು ಅವರವರ ಭಾವನೆಗಳಿಗೆ ಸಂಬಂದಿಸಿದ್ದು, ಅಂತರ್ ಜಾತಿ/ಧರ್ಮ ವಿವಾಹ ಆಗಬಯಸುವವರು ಅದನ್ನು ನಮೂದಿಸತಕ್ಕದ್ದು )
  7. ವಧು -ವರರ ಭಾವಚಿತ್ರ .

* ವದು , ವರರ ಅಥವಾ ಅವರ ಕಡೆಯವರ ಒಪ್ಪಿಗೆ ಪಡೆದೆ ನಾವು ಮುಂದಿನ ಸಂವಹನ ನಡೆಸುತ್ತೆವೆ.
* ನಮ್ಮದೇ ಆದ ಬ್ಲಾಗ್ ನಲ್ಲಿ ವದು, ವರರ ವಿವರಗಳನ್ನು ಅವರ ಒಪ್ಪಿಗೆ ಮೇರೆಗೆ (ವಿಳಾಸ, ದೂರವಾಣಿ , ಮಿಂಚೆ ವಿಳಾಸ ಹೊರತು ಪಡಿಸಿ ) ಸಂಕ್ಷಿಪ್ತವಾಗಿ ಪ್ರಕಟಿಸಲಾಗುವುದು .

* ಕೇವಲ ವದು , ವರರ ಸಂಪರ್ಕ , ಪರಿಚಯ , ವಸ್ಟೇ ವೇದಿಕೆಯ ಜವಾಬ್ದಾರಿ. ಮುಂದಿನ ಆಗು ಹೋಗುಗಳಿಗೆ ವೇದಿಕೆ ಜವಾಬ್ದಾರಿಯಾರಿರುವುದಿಲ್ಲ .
ನಾವು ಕಾರ್ಯನಿರತ ಮಾಡಿಸುವವರಲ್ಲ, ನಮ್ಮ ಸ್ನೇಹಿತರನೇಕರು, ಹುಡುಗ ಅಥವಾ ಹುಡುಗಿ ಹುಡುಕಲು ಬೆಂದು , ನೊಂದು ,ಸುಸ್ತಾಗಿ ಹೋಗಿರುವುದನ್ನು ಕಣ್ಣಾರೆ ಕಂಡ ಕೆಲವು ಸ್ನೇಹಿತರೆಲ್ಲ ಸೇರಿ "ಛಲವಾದಿ ವಧು-ವರರ ಅನ್ವೆಷಣಾ ವೇದಿಕೆ   " ಯ ಹುಟ್ಟಿಗೆ ಯೋಜನೆ ರೂಪಿಸಿದೆವು. ಇದು ಕನ್ನಡ ಮನಸ್ಸುಗಳ ಪ್ರಯೋಗ ಶೀಲ ಪ್ರಯತ್ನ. ಇದರಿಂದ ಯಾರಿಗಾದು ಕಿಂಚಿತ್ತಾದರೂ ಸಹಾಯವಾದರು ನಮ್ಮ ಪ್ರಯತ್ನ ಸಾರ್ಥಕ .

SEND REQUEST 


                            JOIN THIS FACEBOOK GROUP                
                       https://www.facebook.com/groups/456343104380224/

ಧನ್ಯವಾದಗಳೊಂದಿಗೆ

ಛಲವಾದಿ ವಧು-ವರರ ಅನ್ವೆಷಣಾ ವೇದಿಕೆ